ವಾಟ್ಸಾಪ್ ವೆಬ್‌ʼ​ ಬಳಸ್ತಿದ್ದೀರಾ ಎಚ್ಚರ..!

ಡಿಜಿಟಲ್‌ ಡೆಸ್ಕ್:‌ ವಾಟ್ಸಾಪ್ ಬದಲಾಯಿಸಲು ಹೊರಟಿರೋ ಪಾಲಿಸಿ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ವೆ. ​​ಆದ್ರೆ, ವಾಟ್ಸಾಪ್‌ ಮಾತ್ರ ಯಾವುದೇ ಕಾರಣ ವೈಯಕ್ತಿಕ ಚ್ಯಾಟ್​ಗಳು ಸೋರಿಕೆ ಆಗುವುದಿಲ್ಲ ಅಂತಾ ಹೇಳ್ತಿದೆ. ಈ ನಡುವೆ ಗೂಗಲ್​ʼನಲ್ಲಿ ವಾಟ್ಸಾಪ್ ಚಾಟ್​ ಸೋರಿಕೆಯಾಗಿರೋ ಅಂಶ ಹೊರ ಬಿದ್ದಿದ್ದು, ಬಳಕೆದಾರರಲ್ಲಿ ಆತಂಕ ಹುಟ್ಟಿಸಿದೆ.

ಹೌದು, ವಾಟ್ಸಾಪ್‌ ವೆಬ್‌ʼನಲ್ಲಿರುವ ಸಮಸ್ಯೆಯಿಂದ ‌ಸೋರಿಕೆಯಾಗ್ತಿದೆ. ಅದು ಕೂಡ ಕೇವಲ ಒಂದು ಗೂಗಲ್ ಸರ್ಚ್​ನಿಂದ ಖಾಸಗಿ ಚಾಟ್ʼ​ಗಳು‌ ಹಾಗೂ ಕಾಂಟ್ಯಾಕ್ಟ್​ಗಳು ಸಾರ್ವಜನಿಕರಿಗೆ ಸಿಗುತ್ತಿವೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ತಜ್ಞರು, ʼಸೈಬರ್​ ಕಳ್ಳರು ಈ ಮಾಹಿತಿಯನ್ನ ಬಳಸಿಕೊಂಡು ಸುಲಭವಾಗಿ ಫಿಶಿಂಗ್​ ನಡೆಸಬಹುದುʼ ಎಂದಿದ್ದಾರೆ.

ಆದ್ರೆ, ವಾಟ್ಸಾಪ್‌ ಸಂಸ್ಥೆ ಮಾತ್ರ ಇವರೆಗೂ ಈ ಸಮಸ್ಯೆಯ ಬಗ್ಗೆ ಬಾಯಿ ಬಿಚ್ಚಿಲ್ಲ. ಸಮಸ್ಯೆ ಬಗೆಹರಿಸುವ ಮಾತು ಆಡಿಲ್ಲ. ಇದುಹೀಗೆ ಮುಂದುವರೆದ್ರೆ ಮತ್ತಷ್ಟು ಚಾಟ್​ಗಳು ಲೀಕ್​ ಆಗುವ ಸಾಧ್ಯತೆಯಿದೆ.

Leave a Reply

Your email address will not be published.