ನಿತ್ಯವಾಣಿ ನ್ಯೂಸ್, ಚಿತ್ರದುರ್ಗ, ಅ.27 : ಕೋಟಿ ಕಂಠ ಗಾಯನ ಕಾರ್ಯಕ್ರಮದ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡ ನಾಡು ನುಡಿಯನ್ನು ಸ್ತುತಿಸುವಂತಹ *ಕೋಟಿ ಕಂಠ ಗಾಯನ* ಕಾರ್ಯಕ್ರಮವನ್ನು ನಾಳೆ ಶುಕ್ರವಾರದಂದು ಬೆಳಗ್ಗೆ 11-00 ಗಂಟೆಗೆ ಆಯೋಜಿಸಲಾಗಿದ್ದು,
ಕಾರ್ಯಕ್ರಮವು ಚಿತ್ರದುರ್ಗ ಜಿಲ್ಲೆಯಾದ್ಯಂತ ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವತಿಯಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೆಳಕಂಡ ಕನ್ನಡ ಗೀತೆಗಳನ್ನು ಸಮೂಹವಾಗಿ ಹಾಡಲು ಯೋಜಿಸಲಾಗಿದೆ.
1) *ನಾಡಗೀತೆ: ಜಯ ಭಾರತ ಜನನಿಯ ತನುಜಾತೆ,*
2) *ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,*
3) *ಭಾರಿಸು ಕನ್ನಡ ಡಿಂಡಿಮವ,*
4) *ಹಚ್ಚೇವು ಕನ್ನಡದ ದೀಪ,*
5) *ವಿಶ್ವ ವಿನೂತನ ವಿಧ್ಯಾ ಚೇತನ* ಹಾಗೂ
6) *ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು.*
ಕರ್ನಾಟಕ ಸರ್ಕಾರದ ಮಹತ್ವಪೂರ್ಣವಾದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯ ಸರ್ಕಾರಿ ನೌಕರರು ತಮ್ಮ ಕುಟುಂಬದ ಸದಸ್ಯರೊಂದಿಗೆ ಭಾಗವಹಿಸಲು ವಿನಂತಿಸಿಕೊಳ್ಳಲಾಗಿದೆ
*ಸ್ಥಳ:- ಜಿಲ್ಲಾಧಿಕಾರಿಗಳ ಕಛೇರಿ ಆವರಣ*
*ಸಮಯ: ನಾಳೆ ಶುಕ್ರವಾರದಂದು ಬೆಳಿಗ್ಗೆ ಸರಿಯಾಗಿ: 10-30 ಕ್ಕೆ ಹಾಜರಾಗಲು ಕೋರಿದೆ.*
ವಿಶೇಷವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವನ್ನು ಪ್ರತಿನಿಧಿಸುವ ಎಲ್ಲಾ ನಿರ್ದೇಶಕರು ಮತ್ತು ಪದಾಧಿಕಾರಿಗಳು, ಎಲ್ಲಾ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ತಮ್ಮ ಇಲಾಖೆಗಳ ನೌಕರರಿಗೆ ಮಾಹಿತಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಭಾಗವಹಿಸುವಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಜಿಲ್ಲಾ ಘಟಕ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಕೆ ಮಂಜುನಾಥ್ ಮನವಿ ಮಾಡಿದ್ದಾರೆ.