ನಿತ್ಯವಾಣಿ ಚಿತ್ರದುರ್ಗ, (ಅ.17) : ಕೋಟೆನಾಡು ಚಿತ್ರದುರ್ಗಕ್ಕೆ ತಮಿಳು ನಾಡು ಕೊಯಮತ್ತೂರಿನಿಂದ ತಮಿಳುನಾಡು ಪೊಲೀಸರು ಗುಜರಾತಿಗೆ ಸರ್ದಾರ್ ವಲ್ಲಭಾಯಿ ಪಟೇಲ್ ಪ್ರತಿಮೆಯು ಅನಾವರಣಗೊಂಡು ಮೂರು ವರ್ಷ ಆಗಿರುವ ಹಿನ್ನೆಲೆಯಲ್ಲಿ ಗುಜರಾತಿಗೆ ಪ್ರಯಾಣ ಗೊಂಡಿರುವ ತಮಿಳು ನಾಡು ಪೊಲೀಸ್ ಪಡೆಗೆ ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಜಿ ರಾಧಿಕಾ ರವರ ನೇತೃತ್ವದಲ್ಲಿ ಸ್ವಾಗತವನ್ನು ಕೋರಿದರು, ಕೋಟೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿ ಇವರ ಪ್ರಯಾಣಕ್ಕೆ ಶುಭವನ್ನು ಕೋರಿದರು, ಈ ಸಂದರ್ಭದಲ್ಲಿ ಕೊಯಮತ್ತೂರಿನ ಅಡಿಷನಲ್ ಎಸ್ಪಿ ಕುಮಾರ್, ಚಿತ್ರದುರ್ಗದ ಡಿವೈಎಸ್ಪಿ ಪಾಂಡುರಂಗ, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ರಮೇಶ್ ರಾವ್ , ಪ್ರಕಾಶ್, ನಹೀಮ್, ಹಾಗೂ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು