ನಿತ್ಯವಾಣಿ,ಚಿತ್ರದುರ್ಗ,(ಜೂ.17) : ಕೋವಿಡ್‍ಗೆ ಬಲಿಯಾಗಿ ಕುಟುಂಬದ ಸದಸ್ಯರುಗಳನ್ನು ಕಳೆದುಕೊಂಡು ಜೀವನಕ್ಕೆ ಪರಿತಪಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಪಯುಕ್ತ ಯೋಜನೆಯನ್ನು ಘೋಷಿಸಿ ಆರ್ಥಿಕ ಬೆಂಬಲಕ್ಕೆ ನಿಂತಿರುವುದನ್ನು ಬಿಜೆಪಿ.ಜಿಲ್ಲಾ ಎಸ್ಸಿ ಮೋರ್ಚ ಜಿಲ್ಲಾಧ್ಯಕ್ಷ ಎಂ.ಹಾಲಪ್ಪ ಹಾಗೂ ಉಪಾಧ್ಯಕ್ಷ ನಾಗರಾಜ್ ಕೆ.ಟಿ.ನೆಲ್ಲಿಕಟ್ಟೆ ಇವರುಗಳು ಸ್ವಾಗತಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪರಿಶಿಷ್ಟ ಜಾತಿಯ ಕುಟುಂಬದಲ್ಲಿ ಸರ್ಕಾರದ ನಿಯಮಾನುಸಾರ ಅರ್ಹ ವ್ಯಕ್ತಿಗೆ ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ದಿ ಸಂಸ್ಥೆಗಳಿಂದ ತರಬೇತಿ ಪಡೆದಿರುವ ಕುಟುಂಬದ ಸದಸ್ಯರಿಗೆ ಸಣ್ಣ ಮತ್ತು ಮಧ್ಯಮ ಉದ್ದಿಮೆ ಹಾಗೂ ಲಾಭದಾಯಕ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಕುಟುಂಬ ನಿರ್ವಹಣೆಗೆ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಿರುವುದು ಅಭಿನಂದನಾರ್ಹ.
ರಾಷ್ಟ್ರೀಯ ಪರಿಶಿಷ್ಟ ಜಾತಿಯ ಹಣಕಾಸು ಅಭಿವೃದ್ದಿ ನಿಗಮ ನವದೆಹಲಿ ಇವರಿಂದ ಗರಿಷ್ಟ ನಾಲ್ಕು ಲಕ್ಷ ರೂ. ಒಟ್ಟು ಘಟಕ ವೆಚ್ಚ ಐದು ಲಕ್ಷ ರೂ.ಗಳವರೆಗೆ ನಿಗಮದಿಂದಲೆ ನೇರವಾಗಿ ಸಾಲ ಹಾಗೂ ಸಹಾಯಧನ ಮಂಜೂರು ಮಾಡುವ ವಿಶೇಷ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ.
ಕೋವಿಡ್‍ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಒಂದು ಲಕ್ಷ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ದೇಶದಲ್ಲಿಯೇ ಕರ್ನಾಟಕ ಪರಿಹಾರ ನೀಡುವಲ್ಲಿ ಮೊದಲ ರಾಜ್ಯವಾಗಿರುವುದು ಹೆಮ್ಮೆಯ ಸಂಗತಿ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಸರ್ಕಾರ ದಲಿತರ ಪರವಾಗಿದೆ ಎನ್ನುವುದು ಈಗ ಘೋಷಿಸಿರುವ ವಿಶೇಷ ಪ್ಯಾಕೇಜ್‍ನಿಂದ ದೃಢಪಟ್ಟಿದೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಎಂ.ಹಾಲಪ್ಪ ಹಾಗೂ ಉಪಾಧ್ಯಕ್ಷ ನಾಗರಾಜ್ ಕೆ.ಟಿ.ನೆಲ್ಲಿಕಟ್ಟೆ ಇವರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುದ್ದಿಗಾಗಿ, ಜಾಹೀರಾತಿಗಾಗಿ ,👉ನಿತ್ಯವಾಣಿ ಕನ್ನಡ ದಿನಪತ್ರಿಕೆ, ಸಂಪಾದಕರು ಎಸ್ ಟಿ ನವೀನ್ ಕುಮಾರ್, ಚಿತ್ರದುರ್ಗ, ಮೊಬೈಲ್ -9901254020 www.nithyavaninews.com