ನಿತ್ಯವಾಣಿ, ಚಿತ್ರದುರ್ಗ,(ನ.3) : ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧನಿಗೆ ಚಿತ್ರದುರ್ಗದಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ಇನ್ನೂ ಚಿತ್ರದುರ್ಗ ತಾಲ್ಲೂಕಿನ ಕುಂಚಿಗನಾಳ್ ಗ್ರಾಮ ಮೂಲದ ಕೆ.ವೇಣುಗೋಪಾಲ್ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಮರಳಿದ್ದು ಚಿತ್ರದುರ್ಗದಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ.
CRPF ನಲ್ಲಿ 16 ವರ್ಷ ಸೇವೆ ಸಲ್ಲಿಸಿರುವ ವೇಣುಗೋಪಾಲ್ ಇಂದು ಮರಳಿದ್ದು ನಿವೃತ್ತಿ ಹೊಂದಿ ಬಂದ ಯೋಧನಿಗೆ ಅದ್ಧೂರಿ ಸ್ವಾಗತ ಮಾಡಲಾಯಿತು.
ಚಿತ್ರದುರ್ಗ ಸಾರಿಗೆ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯನ್ನ ನಡೆಸಲಾಯಿತು. ಹೂವಿನಿಂದ ಅಲಂಕೃತ ತೆರೆದ ವಾಹನದಲ್ಲಿ ಯೋಧನ ಮೆರವಣಿಗೆ ನಡೆಸಲಾಯಿತು. ವಾದ್ಯ ಮೇಳದ ಜತೆಗೆ ಯೋಧನ ಅದ್ಧೂರಿ ಮೆರವಣಿಗೆ ಮಾಡಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಕುಟುಂಬ ಸಮೇತ ಯೋಧನ ಮೆರವಣಿಗೆಯನ್ನ ನಡೆಸಲಾಯಿತು.