ವಾಟ್ಸಾಪ್ ನವೀಕರಣಗೊಂಡಿದ್ದು, ತನ್ನ ಗ್ರಾಹಕರಿಗೆ ಮತ್ತೊಂದು ಹೊಸ ವೈಶಿಷ್ಟ್ಯವನ್ನ ಪರಿಚಯಿಸಿದೆ. ಇನ್ಮುಂದೆ ನೀವು ವೀಡಿಯೋ ತುಣುಕೊಂದನ್ನ ಬೇರೊಬ್ಬರಿಗೆ ಕಳಿಸುವ ಮುನ್ನ ಅದನ್ನ ಮ್ಯೂಟ್ ಮಾಡಬಹುದು. ಅಂದ್ರೆ, ನೀವು ಕಳಿಸುವ ವೀಡಿಯೋ ಹಿನ್ನೆಲೆ ಧ್ವನಿಯನ್ನ ಮ್ಯೂಟ್ ಮಾಡ್ಬೋದು.
ವರದಿಗಳ ಪ್ರಕಾರ, ಸಧ್ಯ ಈ ವೈಶಿಷ್ಟ್ಯವನ್ನ ವಾಟ್ಸಾಪ್ʼನ ಆಂಡ್ರಾಯ್ಡ್ ಬೀಟಾ ಆವೃತ್ತಿ 2.21.3.13 ಯಲ್ಲಿ ಲಭ್ಯವಿದೆ. ಇನ್ನು ಶೀಘ್ರದಲ್ಲೇ ವಿಶೇಷ ವೈಶಿಷ್ಟ್ಯವು ಶೀಘ್ರದಲ್ಲೇ ನಿಮ್ಮ ಮೊಬೈಲ್ʼನಲ್ಲಿಯೂ ಲಭ್ಯವಾಗಲಿದೆ. ಇಲ್ಲಿಯವರೆಗೆ ಬಹುಶಃ ಇದು ಎಲ್ಲಾ ಬಳಕೆದಾರರನ್ನ ತಲುಪಿಲ್ಲ. ಆದ್ರೆ, ಮುಂಬರುವ 1-2 ದಿನಗಳಲ್ಲಿ ಈ ಅದ್ಭುತ ವೈಶಿಷ್ಟ್ಯವು ಎಲ್ಲಾ ಬಳಕೆದಾರರನ್ನ ತಲುಪಲಿದೆ ಎಂದು ಹೇಳಲಾಗ್ತಿದೆ.
ವೀಡಿಯೋ ಮ್ಯೂಟ್ ಮಾಡಿ ಕಳಿಸೋದ್ಹೇಗೆ..?
ಇದಕ್ಕಾಗಿ ನೀವು ಮೊದಲಿನಂತೆ ವೀಡಿಯೋ ಕಳುಹಿಸುವ ಪ್ರಕ್ರಿಯೆಯನ್ನೇ ಅನುಸರಿಸಬೇಕು. ವಾಟ್ಸಾಪ್ʼನ ಮ್ಯೂಟ್ ವೀಡಿಯೊ ವೈಶಿಷ್ಟ್ಯವನ್ನ ವೀಡಿಯೋ ಕಳುಹಿಸುವ ವಿಂಡೋದಲ್ಲಿ ಎಡಿಟ್ ವಿಡಿಯೋ ಆಯ್ಕೆಯ ಮೇಲೆ ಕ್ಲಿಕ್ ಮಾಡ್ಬೇಕು. ಸ್ಪೀಕರ್ ಐಕಾನ್ʼನ್ನ ಮೇಲಿನ ಎಡಭಾಗದಲ್ಲಿ ನೀಡಲಾಗಿರುತ್ತೆ. ಯಾರಿಗಾದರೂ ವಿಡಿಯೋ ಕಳುಹಿಸುವ ಮುನ್ನ ಸ್ಪೀಕರ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಕಂಪನಿಯು ಕಳೆದ ವರ್ಷದಿಂದ ವಾಟ್ಸಾಪ್ ವಿಡಿಯೋ ಮ್ಯೂಟ್ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ನವೆಂಬರ್ʼನಲ್ಲಿ ಐಫೋನ್ʼನ ಬೀಟಾ ಆವೃತ್ತಿಯಲ್ಲಿ ಇದನ್ನ ಪರೀಕ್ಷಿಸಲಾಯಿತು. ಅದರ ನಂತರ ಈಗ ಆಂಡ್ರಾಯ್ಡ್ʼನಲ್ಲಿ ಮಾಡಲಾಗಿದೆ. ಈಗ ಇದು ಎಲ್ಲಾ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.