ಸ್ತ್ರೀ ಈ ಜಗತ್ತಿನ ಒಂದು ಶಕ್ತಿ.. ಜಗತ್ತಿನಲ್ಲಿ ಸ್ತ್ರೀಗೆ ಒಂದು ಅಮೂಲ್ಯ ಸ್ಥಾನವಿದೆ.. ಮಹಿಳೆಯರು ಪುರುಷರಿಗಿಂತ ಏನು ಕಡಿಮೆಯಿಲ್ಲ ಒಂದು ಕೈ ಮೇಲೆಯೇ ಇರುತ್ತದೆ.. ಆದರೆ ಅವಳಿಗೆ ಅವಕಾಶಗಳು ಕಲ್ಪಿಸಿಕೊಡಬೇಕಷ್ಟೇ. ಮಹಿಳೆಯರು ಯಾವುದರಲ್ಲಿ ಕಡಿಮೆ ಇದ್ದಾರೆ ವಾಹನ ಓಡಿಸುವುದು, ವಿಮಾನ, ರೈಲು ಓಡಿಸುವುದು, ಆಪಿಸ್ ಕೆಲಸ ಈಗೆ ಎಲ್ಲದರಲ್ಲಿಯೂ ಮುಂದಿದ್ದು ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತಿರುತ್ತಾಳೆ.. ಒಬ್ಬ ಪುರುಷ ಮಾಡುವ ಕೆಲಸಗಳನ್ನು ಮಹಿಳೆಯೂ ಕೂಡ ಮಾಡಬಲ್ಲಳು ಎಂದು ಹಲವು ಬಾರಿ ಸಾಬೀತಾಗಿದೆ..
ಹಾಗೆ ಇಲ್ಲೊಬ್ಬರು ಮಹಿಳೆ ಯಾವುದೇ ಕಷ್ಟಗಳಿಗೆ ಹೆದರದೇ ಸಾಧಿಸುವ ಛಲದಿಂದ ಮುನ್ನುಗ್ಗಿ ಇಂದು ಲಾರಿ ಡ್ರೈವಿಂಗ್ ಮಾಡುತ್ತಾ ಜೀವನ ಮಾಡುತ್ತಿರುವ ವೀರ ಮಹಿಳೆಯೊಬ್ಬರ ಬಗ್ಗೆ ತಿಳಿದುಕೊಳ್ಳೋಣ.. ಈ ಮಹಿಳೆಯ ಹೆಸರು ಯೋಗಿತಾ ರಘುವಂಶಿ ಇವರು ಮೂಲತಃ ಹುಟ್ಟಿದ್ದು ಭೋಪಾಲ್ ನಲ್ಲಿ.. ಇನ್ನು ಇವರು ದಾಂಪತ್ಯ ಜೀವನದಲ್ಲಿ ಮಕ್ಕಳ ಜೊತೆ ಕುಷಿಯಾಗಿ ಸಾಂಸಾರಿಕ ಜೀವನವನ್ನು ನಡೆಸುತ್ತಿದ್ದರು. ಆದರೆ ಸಂತೋಷದಿಂದ ನಡೆಯುತ್ತಿದ್ದ ಯೋಗಿತಾ ಅವರ ಜೀವನದಲ್ಲಿ ಒಂದು ದು’ರ್ಘಟನೆ ನಡೆದು ಹೋಗುತ್ತದೆ.. ಹೌದು 2003 ರಲ್ಲಿ ಯೋಗಿತಾ ಅವರ ಪತಿ ರಸ್ತೆಯ ಅಪಘಾ’ತದಲ್ಲಿ ನಿ’ಧನರಾಗುತ್ತಾರೆ..
ಇನ್ನು ಭಾವ ನಿ’ಧನರಾದರು ಎಂಬ ಸುದ್ದಿಯನ್ನು ಕೇಳಿದ ಯೋಗಿತಾ ಅವರ ಸಹೋದರ ಭಾವನನ್ನು ಕೊನೆಯ ಬಾರಿ ನೋಡಲು ವೇಗವಾಗಿ ಗಾಡಿಯಲ್ಲಿ ಬರುತ್ತಿದ್ದ ಆದರೆ ವಿಧಿಯಾಟ ಯೋಗಿತಾ ಸಹೋದರನು ಕೂಡ ರಸ್ತೆಯ ಅಪಘಾ’ತದಲ್ಲಿ ನಿ’ಧನರಾಗುತ್ತಾರೆ.. ಈಕಡೆ ಪತಿ, ಆ ಕಡೆ ಸಹೋದರನಿಗೆ ಆದ ಘ’ಟನೆ ಯೋಗಿತಾ ಅವರಿಗೆ ಬಹಳ ದುಃಖವನ್ನು ಕೊಡುತ್ತದೆ.. ಇವರಿಬ್ಬರನ್ನು ಕಳೆದುಕೊಂಡು ನಾನು ಅನಾಥಳಾಗಿಬಿಟ್ಟೆ ಎಂದು ಯೋಗಿತಾ ಅವರು ಸಹಿಸಿಕೊಳ್ಳಲಾಗದಷ್ಟು ಕಣ್ಣೀರು ಆಕುತ್ತಾರೆ.. ಇನ್ನು ಇದಾದ ಮೇಲೆ ಮುಂದಿನ ಜೀವನ ಮಕ್ಕಳ ಭವಿಷ್ಯದ ಹೊರೆ ಯೋಗಿತಾ ಅವರ ಮೇಲೆ ಬೀಳುತ್ತದೆ..
ಯೋಗಿತಾ ಅವರು ಲಾ ಡಿಗ್ರಿಯನ್ನು ಪಡೆದಿದ್ದು, ಬ್ಯೂಟಿಷಿಯನ್ ಕೋರ್ಸ್ ಕೂಡ ಮಾಡಿಕೊಂಡಿದ್ದರು.. ಆದರೆ ಇವೆರಡರಲ್ಲಿ ಸಂಪಾದನೆ ಮಾಡುತ್ತಿದ್ದ ಹಣ ಮಕ್ಕಳನ್ನು ಒಳ್ಳೆಯ ಶಾಲೆಯಲ್ಲಿ ಓದಿಸಲು ಸಾಕಾಗುತ್ತಿರಲಿಲ್ಲ.. ಆಗ ಯೋಗಿತಾ ಅವರು ದೈರ್ಯ ಮಾಡಿ ಲಾರಿ ಓಡಿಸಲು ಶುರುಮಾಡುತ್ತಾರೆ.. ಅಂದಿನಿಂದ ಇದುವರೆಗೂ ಸುಮಾರು 15 ವರ್ಷಗಳ ಕಾಲ ಯೋಗಿತಾ ಅವರು ಬೃಹತ್ ಗಾತ್ರದ ಲಾರಿಯನ್ನು ಏಕಾಂಗಿಯಾಗಿ ಯಾರಿಗೂ ಭಯಪಡದೇ ಹೈವೆ ರಸ್ತೆಗಳಲ್ಲಿ ಓಡಿಸುತ್ತಿದ್ದಾರೆ.. ನಮ್ಮ ದೇಶದ ಮೂಲೆ ಮೂಲೆಗಳಲ್ಲಿ ಏಕಾಂಗಿಯಾಗಿ ಡ್ರೈವಿಂಗ್ ಮಾಡುತ್ತಾರೆ..
ಅಲ್ಲದೇ ಯಾವುದೇ ದೊಡ್ಡ ಟ್ರಕ್ ಕೊಟ್ಟರೂ ಸಹ ಸುಲಭವಾಗಿ ಓಡಿಸುವ ಚಾತುರ್ಯವನ್ನು ಹೊಂದಿದ್ದಾರೆ.. ಯೋಗಿತಾ ಅವರಿಗೆ ಈಗ 50 ವರ್ಷವಾಗಿದ್ದರು ತಮ್ಮ ಕೆಲಸವನ್ನು ಮಾತ್ರ ಬಿಟ್ಟಿಲ್ಲ ಈಗಲೂ ಕೂಡ ಎದೆಗುಂದದೆ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.. ಇನ್ನು ಪ್ರತಿಷ್ಠಿತ ಭಾರತದ ಮಹೀಂದ್ರಾ ಕಂಪನಿ ಯೋಗಿತಾ ಅವರಿಗೆ ಉಚಿತವಾಗಿ ಲಾರಿಯನ್ನು ನೀಡಿದ್ದಾರೆ.. ಯೋಗಿತಾ ಅವರ ಈ ಸಾಧನೆ ಕೆಲವು ಬಲಹೀನ ಮಹಿಳೆಯರಿಗೆ ಸ್ಪೂರ್ತಿ..