ನಿತ್ಯವಾಣಿ, ಚಿತ್ರದುರ್ಗ,(ಆಗಸ್ಟ್.01) : ವಿಶ್ವ ಸ್ನೇಹಿತರ ದಿನದಂದು ಶ್ರೀಮಂತರು ಮತ್ತು ಬಡವರು ಒಟ್ಟಿಗೆ ಸ್ನೇಹ ಸಾಧಸಿ, ಜೀವಿಸುವದನ್ನೇ ಇಲ್ಲಿ ಕಲಿಯಬೇಕಾಗಿರುವ ದಿನವಾಗಿದೆ. ಶ್ರೀಮಂತ ಮಕ್ಕಳು ಬಡಮಕ್ಕಳ ಜೊತೆ ಸ್ನೇಹ ಸಾಧಿಸಿದಾಗ, ಬಡವರಲ್ಲಿರುವ ಧೈರ್ಯ, ಸಾಹಸ, ಬದುಕುವ ಶೌರ್ಯ, ಸರಳತೆ, ಒಗ್ಗಟ್ಟು ಇವೆಲ್ಲವನ್ನು ಅರ್ಥಮಾಡಿಕೊಳ್ಳುತ್ತಾರೆ. ಹಾಗೆ ಬಡಮಕ್ಕಳು ಶ್ರೀಮಂತರ ಜತೆ ಸ್ನೇಹ ಸಾಧಿಸಿದಾಗ ಅವರಲ್ಲಿರುವ ಸ್ವಚ್ಚತೆ, ಜ್ಞಾನ, ಅರಿವು, ಆರೋಗ್ಯ, ವಿಷಯ ಸಂಗ್ರಹಣೆಯನ್ನ ಕಲಿತು ಜಾಣರಾಗುತ್ತಾರೆ. ಹಾಗಾಗಿ ಮಕ್ಕಳಲ್ಲಿ ನಾವು ಬೇದಭಾವ ಕಲ್ಪಿಸದೆ, ಬಡವನಿರಲಿ, ಶ್ರೀಮಂತನಿರಲಿ ಒಟ್ಟಿಗೆ ಬದುಕುವುದನ್ನು ತಿಳಿಸಿಕೊಡಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ತಿಳಿಸಿದರು.
ಅವರು ನಗರದ ಮೆದೇಹಳ್ಳಿ ಗ್ರಾಮಬಳಿ ಇರುವ ಕೊಳೆಗೇರಿಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮೆದೇಹಳ್ಳಿ ಗ್ರಾಮದ ಜನರ ಸಹಯೋಗದೊಂದಿಗೆ ಆಯೋಜಿಸಿದ್ದ “ವಿಶ್ವ ಸ್ನೇಹಿತರ ದಿನ ಜನಜಾಗೃತಿ ಕಾರ್ಯಕ್ರಮದಲ್ಲಿ” ಮಾತನಾಡಿದರು.
ಸಾಮಾನ್ಯವಾಗಿ ನಾವು ಸ್ನೇಹಿತರ ದಿನದಲ್ಲಿ, ದೊಡ್ಡದಾದ ಹೋಟೆಲ್ ಗಳಲ್ಲಿ ಕಾರ್ಯಕ್ರಮ ಇಟ್ಟುಕೊಂಡು, ಕೇಕ್ ಕತ್ತರಿಸಿ, ಆಡಂಬರದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕುಡಿದು, ಕುಪ್ಪಳಿಸಿ, ಪೆಟ್ರೋಲ್ ಕಾರ್‌ಗಳನ್ನ, ಬೈಕ್‌ಗಳನ್ನ ಜೋರಾಗಿ ಓಡಿಸಿ, ಧೂಮಪಾನ, ಮದ್ಯಪಾನ, ಡ್ರಗ್ಸ್ ಸೇವನೆಹಿಂದ ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಯುವಜನಾಂಗ ಸಹ ಸಮಾಜಸೇವೆಯ ಉದ್ದೇಶವಿಟ್ಟುಕೊಂಡು, ಬಡವರರೊಂದಿಗೆ ಸಂಬಂಧ ಕಲ್ಪಿಸಿಕೊಂಡು, ಅವರಿಗೆ ಬೇಕಾದಂತ ಸಹಾಯ ಮಾಡಿ, ಅವರನ್ನು ಮೇಲೆತ್ತುವುದರ ಬಗ್ಗೆ ಚಿಂತನೆ ಮಾಡಿದರೆ, ವಿಶ್ವ ಸ್ನೇಹಿತರ ದಿನಾಚರಣೆ ಸಾರ್ಥಕ ಪಡೆಯುತ್ತದೆ ಎಂದರು.
ಕೃಷ್ಣ ಬಡತನದ ತನ್ನ ಸ್ನೇಹಿತನಾದ ಸುಧಾಮನ ಬಗ್ಗೆ ಚಿಂತೆ ಮಾಡಿ ಆತನಿಗೆ ಸಹಾಯ ಕಲ್ಪಿಸುವುದರ ಬಗ್ಗೆ ಯೋಚಿಸುತ್ತಾನೆ. ಕೃಷ್ಣಾ ಮತ್ತು ಸುಧಾಮರ ಸ್ನೇಹಿತರ ಭಾಂದವ್ಯವನ್ನು ನಾವು ಸಮಾಜದಲ್ಲಿ ಪ್ರಚಾರಪಡಿಸಬೇಕಾಗಿದೆ. ಅಪರಿಚಿತರು ಪರಿಚಿತರಾಗಿ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವ ಒಂದು ಸುಂದರ ಬಂದವೇ ಸ್ನೇಹ. ಪ್ರತಿಯೊಬ್ಬರು ಸಹ ಕುಟುಂಬವನ್ನು ಹೊಂದುವುದು ಎಷ್ಟು ಮುಖ್ಯವೋ, ಅಷ್ಟೇ ಸ್ನೇಹಿತರನ್ನು ಹೊಂದುವುದು ಮುಖ್ಯವಾಗಿದೆ. ಅದಕ್ಕಾಗಿ ಸ್ನೇಹಿತರು ಎಂದರೆ ನಾವು ನಮ್ಮ ಕುಟುಂಬದವರೆಂದು ತಿಳಿದುಕೊಂಡು, ಅವರನ್ನ ಗೌರವದಿಂದ ನೋಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಲಾಡ್ ಆಟೋಮೊಬೈಲ್ಸ್‌ನ ನಾಗರಾಜ್ ಅವರು ನೀಡಿದ ಮಾಸ್ಕ್‌ಗಳನ್ನು ಮಕ್ಕಳಿಗೆ ಮತ್ತು ಹಿರಿಯರಿಗೆ ವಿತರಿಸಲಾತು. ಮೂರನೇ ಅಲೇ ಕರೋನ ಬರುತ್ತಿರುವುದನ್ನು ಜಾಗ್ರತಿಯನ್ನು, ಹಾಡಿನ ಮುಖಾಂತರ ಮೂಡಿಸಲಾತು. ಮಕ್ಕಳಿಗೆ ಸಿಹಿ ಹಂಚಿ, ಕೊಳೆಗೇರಿ ಮಕ್ಕಳನ್ನ ಸ್ನೇಹಿತರನ್ನಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಹೆಚ್.ಎಸ್.ರಚನ, ಹೆಚ್.ಎಸ್.ಪ್ರೇರಣ ಮಕ್ಕಳಿಗೆ ಸ್ನೇಹದ ಬಗ್ಗೆ ಗಾಯನದ ಮೂಲಕ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೊಳಗೇರಿ ನಿವಾಸಿ ವಿದ್ಯಾರ್ಥಿಗಳಾದ ರಂಜಿತ, ಕಾವೇರಿ, ಸ್ವಾಮಿ. ಸಂಗೀತ, ಮನೋಜ, ಕೆಂಚಕುಮಾರ, ಅಂಜಲಿ, ಜಯಶ್ರೀ ಹಾಜರಿದ್ದರು.