ನಿತ್ಯವಾಣಿ, ಚಿತ್ರದುರ್ಗ, (ಜೂ. 27) : ಕೊರೋನಾ ಅನ್ನೋ ಮಾಹಾಮಾರಿ ವಿದ್ಯಾರ್ಥಿಗಳನ್ನ ಶಾಲೆಗಳಿಂದ ದೂರವಿಟ್ಟಿದೆ. ಕಳೆದ ವರ್ಷದಿಂದ ಶಾಲೆಗಳು ಸಂಪೂರ್ಣ ಬಂದ್ ಆಗಿದ್ದು, ಆನ್‍ಲೈನ್ ತರಗತಿಗಳು ನಡೆಯುತ್ತಿವೆ. ಈ ನಡುವೆ ಚಿತ್ರದುರ್ಗ ಜಿಲ್ಲೆಯ ವಿಧ್ಯಾರ್ಥಿ ತನ್ನ ಕ್ರಿಯೇಟಿವಿಟಿ ಮೂಲಕ ಇಂಡಿಯನ್ ಬುಕ್ ಆಫ್ ರೆಕಾಡ್ರ್ಸ್ (Iಟಿಜiಚಿಟಿ ಃooಞ oಜಿ ಖeಛಿoಡಿಜs) ನಲ್ಲಿ ತನ್ನ ಹೆಸರು ಅಚ್ಚಳಿಯದೆ ಉಳಿಯುವ ಸಾಧನೆ ಮಾಡಿದ್ದಾನೆ. ಕಿರು ನಾಲಿಗೆಯ ಒಳಗೆ ನಾಲಿಗೆ ಹಾಕಿ ಅಚ್ಚರಿ ಮೂಡಿಸಿ ದಾಖಲೆ ಬರೆದಿದ್ದಾನೆ. ಈ ಬಾಲಕನ ಹೆಸರು ಶ್ರೀ ಹರ್ಷ. ಈ ಹುಡುಗ ಚಿತ್ರದುರ್ಗ ನಗರದ ಬ್ಯಾಂಕ್ ಕಾಲೋನಿ ನಿವಾಸಿಗಳಾದ ಯರ್ರಿಸ್ವಾಮಿ ಹಾಗೂ ಮಮತಾರಾಣಿ ದಂಪತಿಗಳ ಪುತ್ರ. ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡ್ತಿದ್ದಾನೆ.
ಕೋವಿಡ್ ಇರೋದ್ರಿಂದ ಕಳೆದ ವರ್ಷದಿಂದ ಶಾಲೆಗಳು ಲಾಕ್ ಆಗಿ ಮನೆಗಳೇ ಶಾಲೆ ಎನ್ನುವಂತಾಗಿದೆ. ಮನೆಗಳಲ್ಲಿ ಆನ್ ಲೈನ್ ಶಿಕ್ಷಣದ ಮೂಲಕ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದಾರೆ. ಇನ್ನೂ ಕೆಲ ವಿಧ್ಯಾರ್ಥಿಗಳು ಮೊಬೈಲ್, ಟಿವಿ ಸೇರಿದಂತೆ ಗೇಮ್ ಆಟವಾಡೋಕೆ ಕಾಲ ಹರಣ ಮಾಡ್ತಿದ್ದಾರೆ. ಈ ಬಾಲಕ ಮಾತ್ರ ಸಮಯ ವ್ಯರ್ಥ ಮಾಡದೆ ದೇಶವೇ ತಿರುಗಿ ನೋಡುವ ಸಾಧನೆ ಮಾಡಿ ತನ್ನ ಹೆಸರನ್ನ Iಟಿಜiಚಿಟಿ booಞ oಜಿ ಖeಛಿoಡಿಜ ನಲ್ಲಿ ದಾಖಲಾಗುವಂತೆ ಮಾಡಿದ್ದಾನೆ. ಈ ಬಾಲಕ ತನ್ನ ಬಾಲ್ಯದಿಂದಲೂ ತನ್ನ ಕಿರು ನಾಲಿಗೆಯನ್ನ ಒಳ ಭಾಗಕ್ಕೆ ತಿರುಗಿಸುವ ಅಭ್ಯಾಸ ಮಾಡ್ತಿದ್ದ.ಇದೀಗ ಲಾಕ್ ಡೌನ್ ಸಮಯದ ವ್ಯರ್ಥ ಮಾಡದೆ, ಅದ್ಬುತ ಸಾಧನೆ ಮಾಡಿದ್ದಾನೆ. ಕಿರು ನಾಲಿಗೆಯ ಒಳಗೆ ಅತೀ ಹೆಚ್ಚು ಸಮಯ ನಾಲಿಗೆ ಹಿಡಿದಿಟ್ಟುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ. ಬಾಲಕನ ಈ ಸಾಧನೆ 2021 ನೇ ಸಾಲಿನಲ್ಲಿ Iಟಿಜiಚಿಟಿ ಃooಞ oಜಿ ಖeಛಿoಡಿಜs ಶ್ರೀ ಹರ್ಷನ ಸಾಧನೆಯನ್ನ ಶ್ಲಾಘಿಸಿದೆ. ಶ್ರೀ ಹರ್ಷನ ಹೆಸರನ್ನ ರೆಕಾರ್ಡ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೆ ಲಾಕ್ ಡೌನ್ ಇರೋ ಕಾರಣಕ್ಕೆ Iಟಿಜiಚಿಟಿ booಞ oಜಿ ಖeಛಿoಡಿಜ ಪ್ರಶಸ್ತಿ ಪತ್ರ, ಪಾರಿತೋಷಕ ಪೋಸ್ಟ್ ಮೂಲಕ ಕಳುಹಿಸಿ ಗೌರವಿಸಿದೆ.
ಇನ್ನು, ಪುತ್ರ ಶ್ರೀ ಹರ್ಷನ ಈ ಸಾಧನೆಗೆ ಮನೆಯಲ್ಲಿ ತಂದೆ ತಾಯಿ ಹಾಗೂ ಪೊಷಕರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಅಲ್ಲದೆ ಹರ್ಷನ ಈ ರೀತಿಯ ವಿಭಿನ್ನ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಶ್ರೀ ಹರ್ಷನ ತಾಯಿ ಮಮತರಾಣಿಯ ಪ್ರೇರಣೆಯಿಂದ ಈ ಸಾಧನೆ ಮಾಡಿದ್ದು, ಅಮ್ಮನ ಪ್ರೀತಿಗೆ ಪಾರವೇ ಇಲ್ಲವಾಗಿದೆ.ಶ್ರೀ ಹರ್ಷನ ಸಾಧನೆ ಇಷ್ಟಕ್ಕೆ ನಿಂತಿಲ್ಲ. ಈತ ಈ ಸಾರಿಯ ಅಂತರರಾಷ್ಟ್ರೀಯ ಮಟ್ಟದ ಜೀನಿಯಸ್ ಸೆರಬ್ರಮ್ ಸೈನ್ಸ್ ಒಲಂಪಿಯಾಡ್‍ನಲ್ಲೂ ಕೂಡ ಸಾಧನೆಯ ಮೈಲುಗಲ್ಲು ಮುಟ್ಟಿದ್ದಾನೆ. ಒಲಂಪಿಯಾಡ್‍ನಲ್ಲಿ ಭಾಗವಹಿಸಿದ್ದ 34 ರಾಷ್ಟ್ರಗಳ ರಾಷ್ಠ್ರಗಳ 9 ಸಾವಿರ ಜನರ ಪೈಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ 456ನೇ, ಪ್ರಾದೇಶಿಕವಾಗಿ 259 ನೇ ರ್ಯಾಂಕ್ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದಾನೆ.
ಶ್ರೀ ಹರ್ಷ ಇನ್ನೂ ಕೆಲ ಕುತೂಹಲಕಾರಿ ಹವ್ಯಾಸಗಳನ್ನ ಬೆಳೆಸಿಕೊಂಡಿದ್ದಾನೆ. ಲಾಕ್ ಡೌನ್ ವೇಳೆ ಗಿಡ, ಮರಗಳನ್ನ ಬೆಳೆಸೋದು, ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ ಮಾನವೀಯ ಕೆಲಸಗಳನ್ನು ಮಾಡಿದ್ದು, ಹರ್ಷನ ಸಾಧನೆಗೆ ಪೋಷಕರು ಫುಲ್ ಖುಷಿಯಾಗಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಟೈಂ ನಲ್ಲಿ ಶಾಲೆಗಳಿಂದ ದೂರ ಇರುವ ಎಷ್ಠೋ ವಿದ್ಯಾರ್ಥಿಗಳು, ಆನ್ ಲೈನ್ ಕ್ಲಾಸ್ ನೆಪದಲ್ಲಿ ಮೊಬೈಲ್ ಗೇಮ್‍ಗಳಲ್ಲಿ ಮುಳುಗಿ ಕಾಲ ಹರಣ ಮಾಡ್ತಿದ್ದಾರೆ. ಆದರೆ ಕೋಟೆನಾಡಿನ ಈ ಬಾಲಕ ಮಾತ್ರ ಕಿರು ನಾಲಿಗೆಯ ಮೂಲಕವೇ ಅಚ್ಚರಿ ಸಾಧನೆ ಮಾಡಿದ್ದು, ಈತನ ಸಾಧನೆ ಮಾಡಿ ಮನಸ್ಸಿದ್ದರೆ ಮಾರ್ಗ ಅನ್ನೋ ರೀತಿ ಛಲದಿಂದಲೇ ಸಾಧನೆಗೈದಿದ್ದಾನೆ. ಈ ಬಾಲಕನ ಸಾಧನೆಗೆ ದುರ್ಗದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.