ಉತ್ತಮ ಆರೋಗ್ಯಕ್ಕಾಗಿ ಯೋಗದ ಜೊತೆಗೆ ಅಗ್ನಿಹೋತ್ರ ಹೋಮ ಮಾಡಿ : ರವಿ ಕೆ.ಅಂಬೇಕರ್

ನಿತ್ಯವಾಣಿ,ಚಿತ್ರದುರ್ಗ. ( ಜ.05)  : ಹೋಮ ಹವನ ಯಜ್ಞ ಮಾಡುವುದರ ಹಿಂದಿರುವ ವೈಜ್ಞಾನಿಕ ಕಾರಣವೆಂದರೆ ಹೋಮ, ಹವನ, ಯಜ್ಞ ಯಾಗ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ನಮ್ಮ ಮನಸ್ಸಿನ ನಕಾರಾತ್ಮಕ ಭಾವನೆಗಳು ಅಳಿಸಿ ಸಕಾರಾತ್ಮಕ ಚಿಂತನೆಗಳು ಮೂಡುತ್ತವೆ. ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ.” ಎಂದು ಯೋಗ ಗುರು ರವಿ,ಕೆ.ಅಂಬೇಕರ್ ತಿಳಿಸಿದರು.
ನಗರದ ನಿವೃತ್ತ ರಾಜ್ಯ ಸರ್ಕಾರಿ ನೌಕರರ ಚಿತ್ರದುರ್ಗ ಶಾಖೆ, ಹಾಗೂ ‌ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಸ್ವಾಮಿ ಯೋಗ ಧ್ಯಾನ ಕೇಂದ್ರದ ವತಿಯಿಂದ ಮಾರುತಿ ನಗರ ಯೋಗ ಕೇಂದ್ರದಲ್ಲಿ ಧನುರ್ಮಾಸ ಹಾಗೂ ಹೊಸ ವರ್ಷಾಚರಣೆಯ ನಿಮಿತ್ತ ಇಂದು ಹಮ್ಮಿಕೊಳ್ಳಲಾಗಿದ್ದ ಅಗ್ನಿಹೋತ್ರ ಹೋಮ ಪೂಜಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಇದೇ ಸಂಧರ್ಭದಲ್ಲಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎ.ಎಸ್.ರಂಗಪ್ಪ ಮಾತನಾಡಿ “ಅಗ್ನಿಹೋತ್ರ ಆರೋಗ್ಯದ ರಹದಾರಿ
ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿವೆ. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ ಅಗ್ನಿಹೋತ್ರ ಮಾಡಿ ತಮ್ಮ ನಕಾರಾತ್ಮಕ ಯೋಚನೆಗಳನ್ನು ಬಗೆಹರಿಸಿಕೊಂಡು ಉತ್ತಮ ಸಮಾಜಕ್ಕೆ ನೆರವಾಗಬೇಕಿದೆ.

ಕಾರ್ಯಕ್ರಮದಲ್ಲಿ ಯೋಗ ಟ್ರಸ್ಟ್ ನ ಸದಸ್ಯರಾದ ವಿಂಡ್ಮಿಲ್ ಶರಣಪ್ಪ, ನೇತ್ರಾ, ಎಂ.ಆರ್.ಮಂಜುನಾಥ್, ವಸಂತಲಕ್ಷ್ಮಿ, ರಾಜು, ಡಾ.ನಾರಾಯಣರೆಡ್ಡಿ, ರುದ್ರಪ್ಪ,  ರೇಷ್ಮ, ಅನೀತ, ಮುಂತಾದವರು ಹಾಜರಿದ್ದರು.

Leave a Reply

Your email address will not be published.