ನಿತ್ಯವಾಣಿ,ಚಿತ್ರದುರ್ಗ,ನ,6, ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ.)ಮಹಿಳಾ ಸೇವಾ ಸಮಾಜ(ರಿ)ಚಿತ್ರದುರ್ಗ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾ ತಾಲೂಕು ಘಟಕ ಚಿತ್ರದುರ್ಗ ಇವರುಗಳ ಸಹಯೋಗದಲ್ಲಿ ಚಿತ್ರದುರ್ಗ ನಗರದ ಎಸ್ ಆರ್ ಬಿ ಎಂ ಎಸ್ ರೋಟರಿ ಬಾಲ ಭವನದಲ್ಲಿ ನವೆಂಬರ್ 6 ನೇ ಭಾನುವಾರ ಇಲ್ಲಿಂದ ದಿನಾಂಕ 14 ರವರೆಗೆ ಬೆಳಿಗ್ಗೆ 6ಗಂಟೆಯಿಂದ 7-15ರವರೆಗೆ ವಿಶ್ವ ಮಧು ಮೇಹ ದಿನದ ಪ್ರಯುಕ್ತ ಉಚಿತ ಯೋಗ ಶಿಬಿರ (ವಿಶೇಷವಾಗಿ ಸಕ್ಕರೆ ಕಾಯಿಲೆ ಬಗೆಗೆ)ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯೋಗಾಚಾರ್ಯರಾದ ಎಲ್.ಎಸ್. ಚಿನ್ಮಯಾನಂದ ಅವರು ಯೋಗ ಶಿಬಿರ ನಡೆಸಿಕೊಡುವರು.ಇವರೊಂದಿಗೆ ವಿಶೇಷ ತರಗತಿಯನ್ನು ಚಿತ್ರದುರ್ಗ ಆಯುಷ್ ಇಲಾಖೆ ಹಿರಿಯ ವೈದ್ಯಾಧಿಕಾರಿಗಳಾದ (ನ್ಯಾಚುರೋಪತಿ) ಡಾ.ಗಂಗಾಧರವರ್ಮ ಅವರು ನವೆಂಬರ್ 6ರಂದು ಮಾಹಿತಿ ನೀಡಲಿದ್ದಾರೆ. ಹಾಗೂ ನವೆಂಬರ್ 13ರಂದು ಇದೇ ಇಲಾಖೆಯ ಆರ್ಯುವೇದ ವಿಭಾಗದ ಡಾ.ಟಿ.ಶಿವಕುಮಾರ್ ಅವರು ತರಗತಿಯ ಮೂಲಕ ಮಾಹಿತಿ ನೀಡಲಿದ್ದಾರೆ. ಈ ಉಚಿತ ಆರೋಗ್ಯ ಸಲಹಾ ಶಿಬಿರದಲ್ಲಿ ಸಾರ್ವಜನಿಕರು ಭಾಗವಹಿಸಿ ಅರಿವು ಮೂಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದು.ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಮೊಬೈಲ್ ನಂಬರ್ ಗೆ ಸಂಪರ್ಕ ಮಾಡಲು ಕೋರಿದ್ದಾರೆ.,9986295285, 9945954088 , 8277349780.