ಕಲಿತ ವಿದ್ಯೆ ಮತ್ತೊಬ್ಬರಿಗೆ ಕಲಿಸುವುದು ನಿಜವಾದ ಗುರು ಕಾಣಿಕೆ -ರವಿ ಕೆ.ಅಂಬೇಕರ್

 

ನಿತ್ಯವಾಣಿ,ಚಿತ್ರದುರ್ಗ,(ಆ.27) : ಗುರು ಕಾಣಿಕೆ ಎಂದರೆ ಒಂದಿಷ್ಟು ಹಣ ಅಥವಾ ವಸ್ತು ನೀಡುವುದಲ್ಲ, ನಾವು ಕಲಿತ ವಿದ್ಯೆಯನ್ನು ಇನ್ನೊಬ್ಬರಿಗೆ ಕಲಿಸಿದಾಗ ಅದು ನಾವು ಕಲಿಸಿದ ಗುರುಗಳಿಗೆ ನೀಡುವ ನಿಜವಾದ ಗುರುಕಾಣಿಕೆಯಾಗುತ್ತದೆ, ಯಾವುದೇ ವಿದ್ಯೆಯನ ಇನ್ನೊಬ್ಬರಿಗೆ ಕಲಿಸುವಾಗ ಅವರು ಮಾತ್ರವೇ ಕಲಿಯುವುದಿಲ್ಲ; ನಾವು ಕಲಿತಿರುವ ವಿದ್ಯೆ ನಮ್ಮಲ್ಲಿ ಪುನಃ ಪರಿಷ್ಕರಣೆಗೆ ಒಳಗಾಗುತ್ತದೆ; ಅದರ ಸೂಕ್ಷ್ಮಗಳು ನಮಗೆ ಮತ್ತೆ ಮತ್ತೆ ಪ್ರಕಟವಾಗಲು ಕಲಿಕಾಸಮಯ ನೆರವಾಗುತ್ತದೆ; ನಾವು ವಿಷಯವನ್ನು ಎಷ್ಟು ಚೆನ್ನಾಗಿ ಕಲಿತ್ತಿದ್ದೇವೆ ಎನ್ನುವುದರ ಪರೀಕ್ಷೆಯು ಆಗ ನಡೆಯುತ್ತಿರುತ್ತದೆ.” ಎಂದು ಮಹರ್ಷಿ ಯೋಗ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಹೇಳಿದರು.
ನಗರದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಸಮಾಜದ ವತಿಯಿಂದ ಕಳೆದ ಆಗಸ್ಟ್ 1ಒಂದನೇ ತಾರೀಖಿನಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಚಿತ್ರದುರ್ಗದ ಮಹರ್ಷಿ ಯೋಗ ಶಿಕ್ಷಣ ಸಂಸ್ಥೆ ಸದಸ್ಯರ ಪರವಾಗಿ ಯೋಗ ಗುರು ಚಿನ್ಮಯನಂದ ಗರೂಜಿಯವರಿಗೆ ಸನ್ಮಾನಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಸರ್ಕಾರಿ ಜೂನಿಯರ್ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಮಹರ್ಷಿ ಯೋಗ ಸಂಸ್ಥೆಯ ಕಾರ್ಯದರ್ಶಿ ಎಂ.ಕೆಂಚವೀರಪ್ಪ ಮಾತನಾಡಿ ” ನಾವು ಎಷ್ಟೇ ಕಲಿತಿದ್ದರೂ ಬೇರೊಬ್ಬರು ಏನಾದರು ಹೊಸತನ್ನು ಕಲಿಸುವಾಗ ನಾವು ನಮ್ಮ ಅಹಂನ್ನು ಬಿಟ್ಟು ವಿಧ್ಯಾರ್ಥಿಗಳಾಗಿ ಭಾಗವಹಿಸಿ ಕಲಿಯಬೇಕು ಆಗ ಮಾತ್ರ ನಾವು ಪರಿಪೂರ್ಣ ಗುರುವಾಗಲು ಸಾಧ್ಯ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹರ್ಷಿ ಯೋಗ ಸಂಸ್ಥೆಯ ಸದಸ್ಯರಾದ ಡಿ.ಮಹೇಶ್, ಎಂ.ಆರ್.ಮಂಜುನಾಥ್, ಶ್ರೀಗುರು ಯೋಗ ಕೇಂದ್ರದ ರಂಗನಾಥ, ಪವನಕುಮಾರ , ಸೋಮಶೇಖರ್ ಹಾಗೂ ವೀರಶೈವ ಸಮಾಜದ ಮುಖಂಡರು ಹಾಜರಿದ್ದರು.

Leave a Reply

Your email address will not be published.