ಚಿತ್ರದುರ್ಗದಲ್ಲಿ ಜೀ ಕನ್ನಡದ ಮಹಾ ಆಡಿಷನ್

ನಿತ್ಯವಾಣಿ, ಚಿತ್ರದುರ್ಗ,(ಡಿ.17) : ಚಿತ್ರದುರ್ಗ ನಗರದಲ್ಲಿ   ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಮಹಾಆಡಿಷನ್ಸ್ ನಡೆಯಲಿದ್ದು,
ಸತತ ಮೂರು ವರ್ಷಗಳಿಂದ ಕನ್ನಡ ಕಿರುತೆರೆಯನ್ನು ಆಳುತ್ತಾ ನಂಬರ್ 1 ಸ್ಥಾನದಲ್ಲೇ ಮುನ್ನುಗ್ಗುತ್ತಿರುವ ಜೀ ಕನ್ನಡ ವಾಹಿನಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುತ್ತಿದೆ. 17 ಸೀಸನ್ ಗಳನ್ನು ಪೂರೈಸಿ ಇಡೀ ಕರ್ನಾಟಕವೇ ಮೆಚ್ಚಿ ಮೆರೆಸಿದ ಗಾಯಕರೊಟ್ಟಿಗೆ ಚಾಂಪಿಯನ್ ಶಿಪ್ ಶುರು ಮಾಡಿ ವಿಶಿಷ್ಟ ಹಾಡುಗಳನ್ನು ಹಾಡುತ್ತ ರಂಜಿಸುತ್ತಿರುವ ಸರಿಗಮಪ ಇದೀಗ ಮುದ್ದು ಮಕ್ಕಳೊಂದಿಗೆ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ನ್ನು ಶುರುಮಾಡುತ್ತಿದೆ. ಅಷ್ಟೇ ಅಲ್ಲದೆ ತಮ್ಮ ಅದ್ಭುತ ಅಭಿನಯದ ಮೂಲಕ ಇಡೀ ಕರುನಾಡಿನ ಮನೆಮಾತಾಗಿದ್ದ ಡ್ರಾಮಾ ಜೂನಿಯರ್ಸ್ ಯಶಸ್ವಿಯಾಗಿ ಮೂರು ಸೀಸನ್ ಗಳನ್ನೂ ಮುಗಿಸಿದ್ದು ಇದೀಗ 4ನೇ ಸೀಸನ್ ಆರಂಭಿಸುತ್ತಿದೆ. ಈ ಎರಡೂ ಕಾರ್ಯಕ್ರಮಗಳ ಆಡಿಷನ್ ಪ್ರಕ್ರಿಯೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲು ಆರಂಭವಾಗುತ್ತಿದೆ.ಡಿಸೆಂಬರ್ 20 ಸೋಮವಾರ , ಚಿತ್ರದುರ್ಗದ ಜಿಲ್ಲಾ ನ್ಯಾಯಾಲದ ಹತ್ತಿರ ಇರುವ ಕೆಕೆ ನ್ಯಾಷನಲ್ ಸ್ಕೂಲ್ ನಲ್ಲಿ ಆಡಿಷನ್ಸ್ ನಡೆಯಲಿದ್ದು ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದೆ. ಆಡಿಷನ್ಸ್ ನಲ್ಲಿ ಭಾಗವಹಿಸಲು ಬರುವವರು ನಿಮ್ಮ ಮಗುವಿನ ಪಾಸ್ಪೋರ್ಟ್ ಸೈಜ್ ಫೋಟೋ ಹಾಗು ಅಡ್ರೆಸ್ ಪ್ರೂಫ್ ಜೆರಾಕ್ಸ್ ತರುವುದನ್ನು ಮರೆಯಬೇಡಿ.ಈ ಎರಡೂ ಕಾರ್ಯಕ್ರಮಗಳ ಆಡಿಷನ್ಸ್ ನಲ್ಲಿ ಭಾಗವಹಿಸಲು ಕೆಲವು ಮಾನದಂಡಗಳಿದ್ದು ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡಲು ಮಗುವಿನ ವಯಸ್ಸು 4 ರಿಂದ 15 ವರ್ಷದೊಳಗಿರಬೇಕು ಹಾಗು ಡ್ರಾಮಾ ಜೂನಿಯರ್ಸ್ ಆಡಿಷನ್ ನಲ್ಲಿ ಭಾಗವಹಿಸುವ ಮಗುವಿನ ವಯಸ್ಸು 4 ರಿಂದ 14 ವರ್ಷದೊಳಗಿರಬೇಕು. ನಿಮ್ಮ ಮನೆಯ ಮಗುವಿನ ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.   ನಿಮ್ಮ ನಿಮ್ಮ ಮಕ್ಕಳ ಸಾಮರ್ಥ್ಯವನ್ನು ತೋರಿಸಲು ಮುಂದೆ ಬನ್ನಿ ಎಂದು      ನಿತ್ಯವಾಣಿ ಪತ್ರಿಕೆ ಶುಭ ಕೋರಿದೆ 

Leave a Reply

Your email address will not be published.